ಜರ್ಮನ್ ಭಾಷೆ -
1961ರ ಗಣತಿಯ ಪ್ರಕಾರ 10 ಕೋಟಿ ಜನ ಮಾತನಾಡುವ ಈ ಭಾಷೆ ಯೂರೋಪಿನ ಪ್ರಮುಖ ಭಾಷೆಗಳಲ್ಲೊಂದು. ಜರ್ಮನಿ ಮತ್ತು ಆಸ್ಟ್ರಿಯಗಳಲ್ಲಿ ಆಡಳಿತ ಭಾಷೆಯಾಗಿಯೂ ಸ್ವಿಟ್‍ಜûರ್ಲೆಂಡಿನಲ್ಲಿ ಆಡಳಿತ ಭಾಷೆಗಳಲ್ಲೊಂದಾಗಿಯೂ (ಫ್ರೆಂಚ್, ಇಟಾಲಿಯನ್ ಮತ್ತು ರೋಮನ್‍ಗಳೊಡನೆ) ಪರಿಗಣಿತವಾಗಿದೆ. ಈ ಭಾಷೆಯ ಶಿಷ್ಟ ರೂಪ ಈ ಮೂರು ದೇಶಗಳಲ್ಲೂ ಪ್ರಾರ್ಯ ಒಂದೇ ಆದರೂ ಆಡು ಭಾಷೆ ಮಾತ್ರ ಆಯಾ ಪ್ರದೇಶವನ್ನವಲಂಬಿಸಿ ಸ್ವಲ್ಪ ಬೇರೆಯಾಗಿದೆ. ಜರ್ಮನ್ ಭಾಷೆಯಲ್ಲಿ ಶಿಷ್ಟ ಭಾಷೆಯೊಂದಿಗೆ ಹಲವು ಉಪಭಾಷೆಗಳಿವೆ. ಮೇಲೆ ಸೂಚಿಸಿದ ದೇಶಗಳಲ್ಲೇ ಅಲ್ಲದೆ ಈ ಉಪಭಾಷೆಗಳು ನೆರೆಯ ಫ್ರಾನ್ಸ್ (ಆಲ್ ಸೇಸ್ ಮತ್ತು ಲೋರೆನ್‍ಗಳ ಕೆಲವು ಭಾಗಗಳಲ್ಲಿ), ಲಕ್ಸಂಬರ್ಗ್ ಮತ್ತು ಉತ್ತರ ಇಟಲಿಯಲ್ಲಿ (ದಕ್ಷಿಣ ಟೈರೋಲ್) ಕೂಡ ವ್ಯವಹಾರದಲ್ಲಿವೆ. ಎರಡನೆಯ ಮಹಾಯುದ್ಧದ ಅಂತ್ಯದ ವೇಳೆಗೆ ಜರ್ಮನ್ ಭಾಷೆ, ಇಂದಿನ ಪಶ್ಚಿಮ ಪೋಲಂಡ್ ಹಾಗೂ ಚೆಕೊಸ್ಲೊವಾಕಿಯಾದ ಕೆಲವು ಭಾಗಗಳಲ್ಲಿ ಉಪಯೋಗದಲ್ಲಿದ್ದಿತಲ್ಲದೆ, ಪೂರ್ವ ಯೂರೋಪಿನಲ್ಲಿ ವೋಲ್ಗಾ ನದಿಯವರೆಗೂ ಜರ್ಮನ್ ಮಾತನಾಡುವವರು ಹರಡಿ ಹೋಗಿದ್ದರು.

ಜರ್ಮನ್ ಭಾಷೆಯ ಶಿಷ್ಟರೂಪದಲ್ಲಿ ಕೆಳಗೆ ಕಾಣಿಸಿರುವ ಸ್ವರಗಳು ಮತ್ತು ವ್ಯಂಜನಗಳು ಇವೆ.
ಸ್ವರಗಳು : ಶಿಥಿಲ : ಇ  ಉ ಮಂದ : ಈ  ಊ
			ಎ 	ಒ 			ಏ 	ಓ
		   ಅ 		  	  ಆ
ಸಂಯುಕ್ತ ಅಯ್ (ಐ) ಒಯ್ ಲವ್ (ಔ) 
ನಿರ್ಬಲ : ಅ (ә)
ಇವುಗಳಲ್ಲದೆ ಏ್ಯ (() ಕೂಡ ಕೆಲವರ ಮಾತಿನಲ್ಲಿ ವಿಶೇಷವಾಗಿಯೂ ಇತರರ ಮಾತಿನಲ್ಲಿ ಅಪರೂಪವಾಗಿಯೂ ಕಂಡುಬರುತ್ತದೆ.
ವ್ಯಂಜನಗಳು ಪ್ ಬ್ ತ್ ದ್ ಕ್ ಗ್
ಸಂಘರ್ಷೀ ಫ್ ವ್ ಸ್ ಜ್  ಹ್ ಶ್ ಜ್
ನಾಸಿಕ್ಯ : ಮ್ ನ್ ಙ
ಅವರ್ಗೀಯ : ಯ್ ಲ್ ರ್
ಜರ್ಮನ್ ಭಾಷೆಯಲ್ಲಿ ನಾಮ, ವಿಶೇಷಣ ಮತ್ತು ಕ್ರಿಯಾ ಎಂದು ಹೆಸರಿಸಬಹುದಾದ ಮೂರು ಗುಂಪಿನ ಪದಗಳನ್ನು ಕಾಣಬಹುದು. ನಾಮಪದಗಳು ಮತ್ತು ವಿಶೇಷಣಗಳು ಎರಡು ವಚನ (ಏಕ ಮತ್ತು ಬಹು) ಮತ್ತು ನಾಲ್ಕು ವಿಭಕ್ತಿ (ಪ್ರಥಮಾ, ದ್ವಿತೀಯಾ, ಚತುರ್ಥಿ, ಷಷ್ಟೀ) ರೂಪಗಳಲ್ಲಿ ಮಾರ್ಪಡುತ್ತವೆ. ವಿಶೇಷಣಗಳಲ್ಲಿ ವಚನ, ವಿಭಕ್ತಿಗಳಲ್ಲದೆ ಲಿಂಗ ಭೇದ (ಪುಂ. ಸ್ತ್ರೀ. ನಪ್) ಮತ್ತು ತರತಮ ರೂಪಗಳಿವೆ. ವಿಶೇಷಣಗಳಲ್ಲಿ ತಮ್ಮ ಮೂಲರೂಪಗಳಲ್ಲಿ ವಾಕ್ಯಗಳಲ್ಲಿ ಉಪಯೋಗವಾದಾಗ ಕ್ರಿಯಾವಿಶೇಷಣವೆನಿಸಿಕೊಳ್ಳುತ್ತವೆ. ಕ್ರಿಯಾಪದಗಳಲ್ಲಿ ಪುರುಷ ಭೇದ (ಪ್ರಥಮ, ಮಧ್ಯಮ, ಅನ್ಯ) ಮತ್ತು ವಚನ ಭೇಧಗಳ (ಏಕ, ಬಹು) ಜೊತೆಗೆ ಕಾಲಭೇದ (ವರ್ತಮಾನ, ಭೂತ) ಮತ್ತು ವಿದ್ಯರ್ಥಕ ಬೇಧ (ನಿರ್ದೇಶಾತ್ಮಕ, ವಸ್ತುನಿಷ್ಠಾತ್ಮಕ, ಆಜ್ಞಾರ್ಥಕ ವಿಧಿ)ಗಳಿವೆ. ಇದಲ್ಲದೆ ಕೃದಂತ ರೂಪಗಳು (ವರ್ತಮಾನ, ಭೂತ) ಸಹ ಕಾಣಸಿಗುತ್ತವೆ. ಮೇಲಿನ ಮುಖ್ಯವಾದ ಮೂರು ಗುಂಪಿನ ಪದಗಳಲ್ಲದೆ ನಿರ್ದೇಶಕ ಇತ್ಯಾದಿ ಸರ್ವನಾಮ, ಉಪಸರ್ಗ ಮತ್ತು ಸಂಯೋಗಾವ್ಯಯ ಮತ್ತು ಹಲವು ಪ್ರಕಾರದ ಕ್ರಿಯಾವಿಶೇಷಣಗಳೂ ಇವೆ.

ಇಂಡೊ-ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಜಮ್ರ್ಯಾನಿಕ್ ಭಾಷೆಯ, ಅದರಲ್ಲೂ ಪಶ್ಚಿಮ ಜಮ್ರ್ಯಾನಿಕ್ ಗುಂಪಿನಲ್ಲಿ ಜರ್ಮನ್ ಭಾಷೆ ಅಂತರ್ಗತವಾಗಿದೆ, ನೆದರ್‍ಲ್ಯಾಂಡಿನ ಭಾಷೆಗಳಾದ ಡಚ್ ಮತ್ತು ಫ್ಲೆಮಿಷ್ ಭಾಷೆಗಳು ಇದರ ಹತ್ತಿರದ ಸಂಬಂಧಿಗಳು. ಪ್ರಾಂತೀಯ ಉಪಭಾಷೆಗಳ ದೃಷ್ಟಿಯಿಂದ ಜರ್ಮನ್ ಮತ್ತು ನೆದರ್‍ಲ್ಯಾಂಡಿನ ಭಾಷೆಗಳು ಒಂದೇ ಮಾಂಡಲಿಕ ರೂಪವೆನಿಸಿಕೊಳ್ಳುತ್ತವೆ. ಹಾಗೂ ಬೆಲ್ಜಿಯಂನ ಉತ್ತರ ತೀರ, ಹಾಲೆಂಡ್, ಜರ್ಮನಿಯಿಂದ ಪ್ರಾರಂಭಿಸಿ ಸ್ವಿಟ್‍ಜರ್ಲೆಂಡಿನ ಬಹುಭಾಗಗಳಲ್ಲಿ ಮತ್ತು ಆಸ್ಟ್ರಿಯಗಳಲ್ಲಿ ಈ ಮಾಂಡಲಿಕ ರೂಪದ ವ್ಯಾಪ್ತಿ ಇರುವುದು ಕಂಡುಬರುತ್ತದೆ. ಈ ಒಂದೇ ಮಾಂಡಲಿಕ ರೂಪದಿಂದ ಕ್ರಿ.ಶ. 15 ರಿಂದ 17ನೆಯ ಶತಮಾನದ ಒಳಗೆ ಎರಡು ಪ್ರತ್ಯೇಕ ಭಾಷೆಗಳು ಹುಟ್ಟಿಕೊಂಡು ಅವುಗಳಲ್ಲಿ ವಾಯುವ್ಯ ಪ್ರದೇಶದಲ್ಲಿ ನೆದರ್‍ಲ್ಯಾಂಡಿಕ್ (ಇದನ್ನೇ ಹಾಲೆಂಡಿನಲ್ಲಿ ಡಚ್ ಎಂದೂ ಬೆಲ್ಜಿಯಂನಲ್ಲಿ ಫ್ಲೆಮಿಷ್ ಎಂದೂ ಕರೆಯುತ್ತಾರೆ) ಮತ್ತು ಇತರೆಡೆಗಳಲ್ಲಿ ಜರ್ಮನ್ ಬೆಳೆದು ಬಂದವು.

ಜರ್ಮನ್ ಭಾಷೆಯ ಶಿಷ್ಟರೂಪ ದಕ್ಷಿಣದ ಉನ್ನತ ಪ್ರದೇಶಗಳಲ್ಲಿ ವ್ಯವಹಾರದಲ್ಲಿದ್ದ ಉಚ್ಚ ಜರ್ಮನ್ ಉಪಭಾಷೆಯಿಂದ ಬೆಳೆಯಿತು. ಉತ್ತರದ ಕೆಳಭಾಗದಲ್ಲಿ ಉಪಯೋಗದಲ್ದಿದ್ದ ನಿಮ್ಮ ಜರ್ಮನ್ ಪ್ರಭಾವ ಶಿಷ್ಟ ಭಾಷೆಯ ಮೇಲೆ ಸ್ವಲ್ಪವೂ ಆಗಲಿಲ್ಲವೆನ್ನಬಹುದು. ಈ ಎರಡು ಉಪ ಭಾಷೆಗಳಿಗೂ ಇರುವ ಮುಖ್ಯ ಭೇದವೆಂದರೆ ಆರನೆಯ ಶತಮಾನದಲ್ಲಿ ದಕ್ಷಿಣದ ಕಡೆಯಿಂದ ಆರಂಭಗೊಂಡು ಬಹುವೇಗವಾಗಿ ಉತ್ತರೆಡೆಗೆ ಹರಡಿದ ವ್ಯಂಜನ ಧ್ವನಿಗಳು ವಿವಿಧ ಮಾರ್ಪಾಡುಗಳಿಂದ ಉಚ್ಚ ಜರ್ಮನ್‍ನಲ್ಲಿ ಕಂಡಬಂದಿದೆ. ಆದರೆ ನಿಮ್ಮ ಜರ್ಮನ್‍ನಲ್ಲಿ ಅವು ಕಂಡುಬಂದಿಲ್ಲ. ಈ ಧ್ವನಿ ಮಾರ್ಪಾಡಿನ ಪರಿಣಾಮದಿಂದ (ನಿಮ್ನ ಜರ್ಮನ್ ಮತ್ತು ಇಂಗ್ಲಿಷಿನಲ್ಲಿ ಇನ್ನೂ ಕಂಡುಬರುವ) ಮೂಲಭಾಷೆಯ ಪ್, ತ್, ಕ್, ವ್ಯಂಜನ ವರ್ಣಗಳು ಪದಾದಿಯಲ್ಲಿದ್ದಾಗ ಸಂಘರ್ಷಿ ಮತ್ತು ದ್ವಿತ್ವ ರೂಪಗಳಲ್ಲಿದ್ದಾಗ ಅನುವರ್ಷಧ್ವನಿಗಳಾಗಿ ಮಾರ್ಪಟ್ಟು, ಸ್ವರಗಳು ಪೂರ್ವದಲ್ಲಿದ್ದಾಗ ಅದೇ ಮತ್ತೆ ಸಂಘರ್ಷಿ ವರ್ಣಗಳಾಗಿರುವುದನ್ನು ಕಾಣಬಹುದು.

ಜಮ್ರ್ಯಾನಿಕ್ 		ಇಂಗ್ಲಿಷ್
ಪ್- 			ಪಾತ್
ಟ್ -			ಟೆನ್
ಕ್-			ಕ್ಯಾನ್
-ಪ್ಟ್-			ಆ್ಯಪಲ್
-ಟ್ಟ್-			ಸಿಟಿಂಗ್
-ಕ್ಕ್-			ಲಿಕಿಂಗ್
-ಪ್-			ಹೋಪ್
-ಟ್-			ಬೈಟ್
-ಕ್-			ಮೇಕ್
-ಷ್-			ಷೀಪ್
-ಟ್         		ಫೂಟ್
-ಕ್-			ಬೂಕ್ 					(ಡಬ್ಲ್ಯೂ.ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ